ವ್ಯಾಸಂಗದಿಂದ ಜೀವನ ಅರ್ಥಪೂರ್ಣವಾಗುವುದು : ಶ್ರೀ. ವಿ. ಶ್ರೀನಿವಾಸನ್
ಮಂಗಲ್ಪಾಡಿ: ಜೂನ್ ೨೦. ಉತ್ತಮ ಪುಸ್ತಕಗಳ ವ್ಯಾಸಂಗದಿಂದ ನಮ್ಮಜೀವನ
ಅರ್ಥಪೂರ್ಣವಾಗುವುದು.ಓದುವಿಕೆ ಬದುಕಿಗೆ ಹೊಸ ಆಯಾಮವನ್ನು ಒದಗಿಸುತ್ತದೆ.ಶತಮಾನದ ಹಿಂದೆಯೇ ಜನರಲ್ಲಿ ಓದುವ ಹವ್ಯಾಸವನ್ನು ಹುಟ್ಟಿಸಿ ಅದನ್ನು ಬೆಳೆಸಿದ ಪಿ.ಎನ್.ಪಣಿಕ್ಕರರ ಜೀವನ ನಮಗೆ ಆದರ್ಶಪ್ರಾಯವಾದುದು.ಅವರು ನಮಗೆ ಮಾದರಿಯಾಗಬೇಕೆಂದು ಚೆಮ್ನಾಡ್ ಶಾಲೆಯ ಅಧ್ಯಾಪಕ,ದೇಶೀಯ ಅಧ್ಯಾಪಕ ಪ್ರಶಸ್ತಿ ಪುರಸ್ಕೃತರಾದ ಶ್ರೀ.ವಿ.ಶ್ರೀನಿವಾಸನ್ ಅಭಿಪ್ರಾಯ ಪಟ್ಟರು.ಅವರು ಮಂಗಲ್ಪಾಡಿ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ನಡೆದ ವಾಚನಾ ಸಪ್ತಾಹ ಹಾಗೂ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಾಲೆಯ ಗ್ರಂಥಾಲಯ ಸದಸ್ಯತನ ವಿತರಣೆಯ ಕಾರ್ಯಕ್ರಮವನ್ನು ಶ್ರೀ.ಕುರಿಯ ವಿಠಲಶಾಸ್ತ್ರಿ ಪ್ರೌಢಶಾಲೆ ಇಲ್ಲಿನ ಕನ್ನಡ ಭಾಷಾ ಅಧ್ಯಾಪಕರಾದ ಶ್ರೀ. ಶ್ರೀಪತಿ ಭಟ್ ಉದ್ಘಾಟಿಸಿ ಮಾತನಾಡಿದರು.ಮಾನ್ಯ ವಿದ್ಯಾಮಂತ್ರಿಯವರ ಸಂದೇಶದ ವಾಚನ ಹಾಗೂ ವಾಚನಾ ದಿನದ ಪ್ರತಿಜೆ಼ಯನ್ನುಸ್ಟಾಫ್ ಸೆಕ್ರೆಟರಿ ಶ್ರೀ.ಪ್ರದೀಪ್ ಕುಮಾರ್ ನಿರ್ವಹಿಸಿದರು.ಕಳೆದ ವರ್ಷ ಗ್ರಂಥಾಲಯದಿಂದ ಅತ್ಯಂತ ಹೆಚ್ಚು ಪುಸ್ತಕಗಳನ್ನುಪಡೆದು ಓದಿದ ನವ್ಯಾಳಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತಾ ಟೀಚರ್ ಬಹುಮಾನ ನೀಡಿದರು.
ವಾಚನಾ ಸಪ್ತಾಹದ ಅಂಗವಾಗಿ ನಡೆಸಿದ ರಸಪ್ರಶ್ನೆ,ಆಶಯ ಬರವಣಿಗೆ,ವಾರ್ತೆ ಓದುವಿಕೆ ಮೊದಲಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ.ಉಮ್ಮರ್ ಅಪೋಲೋ ಸಭೆಯ ಅಧ್ಯಕ್ಷತೆ ವಹಿಸಿದ್ದರು.ವಿದ್ಯಾರಂಗದ ಸಂಚಾಲಕರಾದ ಅಬ್ದುಲ್ ರಹಿಮಾನ್ ಶುಭಹಾರೈಸಿದರು.ಆರನೆಯ ತರಗತಿಯ ವಿದ್ಯಾರ್ಥಿನಿ ನುಸ್ಹ ವಾಚನಾ ದಿನದ ಔಚಿತ್ಯದ ಕುರಿತು ಮಾತನಾಡಿದಳು.ಒಂಭತ್ತನೆಯ ತರಗತಿಯ ವಿದ್ಯಾರ್ಥಿನಿ ರಕ್ಷಿತಾ ಕಯ್ಯಾರ ಕಿಞಣ್ಣ ರೈ ಅವರ ಐಕ್ಯಗಾನ ಹಾಡನ್ನು ಹಾಡಿದಳು.ಶ್ರೀ.ಪ್ರಕಾಶನ್ ಮಾಸ್ತರ್ ಪ್ರಾಸ್ತಾ ವಿಕಮಾತುಗಳನ್ನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ಸುನೀತಾ ಟೀಚರ್ ಅವರ ವಂದನಾರ್ಪಣೆಯೊಂದಿಗೆ ಕೊನೆಗೊಂಡಿತು.ಶ್ರೀ.ಪ್ರವೀಣ್ ಕುಮಾರ್ ರ್ಕಾರ್ಯಕ್ರಮ ನಿರೂಪಿಸಿದರು.
ಇದರ ಅಂಗವಾಗಿ ಪುಸ್ತಕಪ್ರದರ್ಶನ ಜರಗಿತು. ೧೦ನೆಯತರಗತಿಯ ವಿದ್ಯಾರ್ಥಿಗಳಾದ ಮಂಜುನಾಥ,ತೇಜಸ್,ದುರ್ಗಾಪ್ರಸಾದ್,ಕಾರ್ತಿಕ್, ನಿಹಾಲ್,ಮನೀಶ್,ರತೀಶ್,ಧನ್ ರಾಜ್ ಪುಸ್ತಕ ಪ್ರದರ್ಶನ ದ ನೇತೃತ್ವ ವಹಿಸಿದರು.

Comments

Popular posts from this blog